ಯೋಜನೆಗೆ ನೆರವಾಗಿ

ಸಮುದಾಯದ ನೆರವಿಲ್ಲದೆ ಋತುಮಾನದಂತಹ ಪ್ರಯತ್ನಗಳು ಹೆಚ್ಚು ದಿನ ಬಾಳಲಾರದು. ಸಮಾನಾಸಕ್ತರು ಕೈ ಜೋಡಿಸಿದಾಗ ಮಾತ್ರ ಇಂತಹ ಕನಸುಗಳನ್ನು ಜೀವಂತವಾಗಿಡಬಹುದು. ಈ ಒಂದು ವರುಷದಲ್ಲಿ ಹಲವು ಸ್ನೇಹಿತರು ಋತುಮಾನಕ್ಕೆ ಹಲವು ಬಗೆಯಲ್ಲಿ ನೆರವಾಗಿದ್ದಾರೆ. ನಿಮ್ಮಲ್ಲೂ ಹಲವರಿಗೆ ಇಂತಹ ಒಂದು ಯೋಜನೆಯಲ್ಲಿ ಪಾಲ್ಗೊಳ್ಳುವ ಆಸಕ್ತಿ, ಉತ್ಸಾಹ ಇರಬಹುದು. ಹಾಗಿದ್ದಲ್ಲಿ ಬನ್ನಿ…. ನಮ್ಮದು ತೆರೆದ ಬಾಗಿಲು.

ಹೇಗೆ ನೆರವಾಗಬಹುದು?

1463478344_office-01ಈ ಯೋಜನೆಗೆ ಸಂಬಂಧಪಟ್ಟಂತೆ ಸಾಕಷ್ಟು ಬರಹಗಳನ್ನು ಟೈಪಿಸುವ, ಅನುವಾದಿಸುವ, ವಿಡಿಯೋಗಳಿಗೆ ಉಪಶೀರ್ಷಿಕೆ ಬರೆಯುವ ಕೆಲಸವಿರುತ್ತದೆ. ಬರವಣಿಗೆ ನಿಮ್ಮ ಇಷ್ಟದ ವಿಷಯವಾಗಿದ್ದರೆ, ನಿಮ್ಮ ಬರಹಗಳ ಮೂಲಕವೇ ನಮ್ಮ ಜತೆಯಾಗಬಹುದು.

 
 
 

1463478069_video-cameraಛಾಯಾಗ್ರಹಣ , ಸಂಕಲನದಲ್ಲಿ ನೀವು ನಿಪುಣರಾಗಿದ್ದರೆ, ನಿಮ್ಮ ಕೌಶಲ್ಯದ ನೆರವು ನಮಗೆ ಬೇಕು.

 
 
 
 

1463479979_Text_Editorಭೂತಾರಾಧನೆಗೆ ಸಂಬಂಧಪಟ್ಟ ಸಾಹಿತ್ಯಿಕವಾಗಿ , ಐತಿಹಾಸಿಕವಾಗಿ, ಸಾಂಸ್ಕೃತಿಕವಾಗಿ ಮಹತ್ವದ ಆಡಿಯೋ , ವೀಡಿಯೋ , ಪಠ್ಯ , ಚಿತ್ರ ಗಳು ನಿಮ್ಮ ಬಳಿ ಇದ್ದಲ್ಲಿ ದಾಖಲೀಕರಣ ಯೋಜನೆಗೆ ಕೊಡಿ. ಇನ್ನಷ್ಟು ಜನಕ್ಕೆ ಅದು ತಲುಪುತ್ತದೆ .

 
 
 

1463477978_cash-money-walletಹಣ ಎಲ್ಲದಕ್ಕಿಂತ ದೊಡ್ಡದಲ್ಲ; ಆದರೇ ಹಣವಿರದೇ ಇಂತಹ ಕನಸುಗಳು ಈಡೇರುವುದು ಕಷ್ಟಸಾಧ್ಯ. ಹೆಜ್ಜೆ ಹೆಜ್ಜೆಗೂ ಖರ್ಚಿನ ಬಾಬತ್ತಿರುವ ಈ ದುಬಾರಿ ದುನಿಯಾದಲ್ಲಿ ಧನ ಸಹಾಯವನ್ನೂ ನಾವು ಅಪೇಕ್ಷಿಸುತ್ತೇವೆ.ಮಿಂದಾಣಕ್ಕೆ ತಗಲುವ ವಾರ್ಷಿಕ ಶುಲ್ಕ, ಸಂದರ್ಶನಗಳನ್ನು ಚಿತ್ರಿಕರಿಸಲು, ಪ್ರಯಾಣಕ್ಕೆ, ಆಕಾಶವಾಣಿ , ದೂರದರ್ಶನ ಸೇರಿದಂತೆ ಹಲವೆಡೆ ಸಂಗ್ರಹಿತವಾಗಿರುವ ಅಮೂಲ್ಯ ದೃಶ್ಯ-ಶ್ರಾವ್ಯ ವನ್ನು ಹೊರ ತೆಗೆಸಲು, ಹೀಗೆ ಪ್ರತಿಯೊಂದಕ್ಕೂ ಹಣದ ಅಗತ್ಯವಿದೆ. ಹೀಗಾಗಿ ಆರ್ಥಿಕವಾಗಿಯೂ ನೀವು ನಮಗೆ ನೆರವಾಗಬಹುದು.


ನೇರವಾಗಿ ನಮ್ಮ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಲಿಚ್ಚಿಸುವವರಿಗೆ ವಿವರಗಳು


RUTHUMANA TRUST
ACCOUNT NO : 6543530753
IFSC CODE : IDIB000J028
BANK : INDIAN BANK
BRANCH : J P NAGAR , BENGALURU